ವಧುವಿನಿಂದ ತಾಳಿ ಕಟ್ಚಿಸಿಕೊಂಡ ವರ ಮಹಾಶಯ- ಸೀರೆ ಉಡಬೇಕಿತ್ತು ಎಂದು ಕಾಲೆಳೆದ ನೆಟ್ಟಿಗರು

 ಡಿಜಿಟಲ್ ಡೆಸ್ಕ್= ವರ- ವಧುವಿಗೆ ತಾಳಿ ಕಟ್ಟಿ ಹಾರ ಬದಲಾಯಿಸಿಕೊಳ್ಳುವುದು ಸರ್ವೆಸಾಮಾನ್ಯ. ಆದರೆ ಇಲ್ಲೊಬ ಮಹಾಶಯ ವಧುವಿನಿಂದ ಮೊದಲು ತಾಳಿ ಕಟ್ಟಿಸಿಕೊಂಡು, ತರುವಾಯ ವಧುವಿಗೆ ಮಂಗಳು ಸೂತ್ರ ಕಟ್ಟಿದ್ದಾನೆ. ಹೀಗೆ ಮದುವೆಯಾಗಲು ಒಂದು ಬಲವಾದ ಕಾರಣವಿದೆ.

ಮುಂಬೈನಲ್ಲಿರುವ ವರನ ಹೆಸರು ಶಾರ್ದೂಲ್ ಕದಮ್, ವಧುವಿನ ಹೆಸರು ತನುಜಾ. ಶಾರ್ದೂಲ್ ಮತ್ತು ತನುಜಾ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು. ಓದಿನ ವಿಚಾರದಲ್ಲಿ ಇಬ್ಬರು ಸ್ನೇಹಿತರಾದರು. ಸ್ನಾತಕೋತರ ಪದವಿಯ ನಂತರ ಇಬ್ಬರು ನಾಲ್ಕು ವರ್ಷಗಳ ಕಾಲ ಭೇಟಿ ಆಗಲೆ ಇಲ್ಲ. ಇನ್ಟ್ರಾಗ್ರಾಂನಲ್ಲಿ ಮತ್ತೊಬ್ಬ ಸ್ನೇಹಿತ ಹಾಡೊಂದನ್ನು ಶೇರ್ ಮಾಡಿದ್ದಳು. ಅದಕ್ಕೆ ತನುಜಾ torture ಎಂದು ಕ್ಯಾಪ್ಷನ್ ಹಾಕಿದ್ದಳು. ಇದಕ್ಕೆ ಶಾರ್ದೂಲ್ ಕದಮ್ maha torture ಅಂತ ಪ್ರತಿಕ್ರಿಯೆ ಕೊಟ್ಟಿದ್ದನು.
ಈ ವಿಚಾರವಾಗಿ ಇಬ್ಬರು ಮತ್ತೆ ಮಾತುಕತೆಗೆ ಇಳಿದರು. ಇಬ್ಬರ ಸಲುಗೆಯ ಮಾತು ಪ್ರೇಮಕ್ಕೆ ತಿರುಗಿತು. ಈ ಮೂಲಕ ಒಂದು ವರ್ಷ ಡೇಟ್ ಮಾಡಿದ್ದ ಶಾರ್ದೂಲ್ ಮತ್ತು ತನುಜಾ ಮದುವೆಯಾಗಲು ನಿಶ್ಚಸುತ್ತಾರೆ.
ಈ ಪ್ರೇಮ ವಿವಾಹಕ್ಕೆ ಎರಡು ಮನೆಯ ಪೋಷಕರು ಒಪ್ಪಿಗೆ ಸೂಚಿಸಿದರು. ಆದರೆ ಎರಡು ಮನೆಯವರ ಮಾತುಕತೆ ವೇಳೆ ಶಾರ್ದೂಲ್ ಒಂದು ಕಂಡಿಷನ್ ಹಾಕುತ್ತಾನೆ. ನಾನು ಸ್ತ್ರಿ ಮಾನವತಾ ವಾದಿಯಾಗಿದ್ದು, ನಾನು ತನುಜಾಗೆ ತಾಳಿ ಕಟ್ಟಿದಂತೆ, ನನಗೂ ತನುಜಾ ಮಂಗಳಸೂತ್ರ ಕಟ್ಟಬೇಕು ಎಂದು ಹೇಳಿದ್ದನು. ಸಾಂಪ್ರಾದಿಕ ಕುಟುಂಬವಾದ ಕಾರಣ ಇದಕ್ಕೆ ಎರಡು ಮನೆಯವರು ಸನ್ಮತಿ ಸೂಚಿಸಲಿಲ್ಲ. ಆದರೆ ಶಾರ್ದೂಲ್ ಹಠ ಮಾತ್ರ ಬಿಡಲಿಲ್ಲ. ಅನಿವಾರ್ಯವಾಗಿ ಎರಡು ಮನೆಯವರು ಇದಕ್ಕೆ ಸಮ್ಮತಿದರು.
ಇದೇ ವೇಳೆ ಶಾರ್ದೂಲ್ ಮತ್ತೊಂದು ಕಂಡಿಷನ್ ಹಾಕುತ್ತಾನೆ. ಅದು ಏನಂದ್ರೆ ಮದುವೆಗೆ ಆಗುವ ವೆಚ್ಚದಲ್ಲಿ ಅರ್ಧವನ್ನು ನಾನು ಭರಿಸುತ್ತೇನೆ ಎಂದು ಹೇಳಿದನು. ಇದದಕ್ಕೂ ಒಪ್ಪಿದರು.


ಮದುವೆಯ ಹಿಂದಿನ ದಿನ ಕುತೂಹಲಕ್ಕೆಡೆಯಾದ ತನುಜಾ, ನಿಜವಾಗಿಯೂ ನಾನು ನಿನಗೆ ಮಂಗಳ ಸೂತ್ರ ಕಟ್ಟಬೇಕೆ ಎಂದು ಪ್ರಶ್ನಿಸಿದ್ದಳು. ಯಾವ ಕಾರಣಕ್ಕೆ ಈ ತೀರ್ಮಾನ ಎಂದು ಶಾರ್ದೂಲ್ ವಿವರಿಸಿ ಹೇಳುತ್ತಾನೆ.
ಹಾಗೂ ಹೀಗು ಮದುವೆ ದಿನ ಹತ್ತಿರ ಬಂದೆ ಬಟ್ಟಿತು. ಮದುವೆಯ ದಿನ ವಧು-ವರ ಇಬ್ಬರು ಹಾರ ಬದಾಲಿಯಿಸಿಕೊಂಡರು. ಹಾಗೆಯೇ ಶೂರ್ದೂಲ್ ಮೊದಲು ತನುಜಾಳಿಂದ ಮಂಗಳ ಸೂತ್ರ ಕಟ್ಟಿಸಿಕೊಂಡ ತರುವಾಯ ತನುಜಾಳಿಗೆ ತಾಳಿ ಕಟ್ಟಿದ.

ಮದುವೆ ವೇಳೆ ವಧು ತಾಳಿ ಪೂಜೆ ಮಾಡಿದಂತೆ, ಈ ವರ ಮಹಾಶಯ ತಾನು ಮಂಗಳಸೂತ್ರ ಕಟ್ಟಿಸಿಕೊಂಡ ನಂತರ ಪೂಜೆ ಮಾಡಿದ್ದಾನೆ.
ಈಗ ಈ ವಿಚಾರ ತುಂಬಾ ವೈರಲ್ ಆಗಿದೆ. ಪರ-ವಿರೋಧದ ಚರ್ಚೆ ನಡೆಸುತ್ತಿದೆ. ಇಷ್ಟೆಲ್ಲಾ ಮಾತನಾಡುವ ಶಾರ್ದೂಲ್ ಪಂಚೆ ಬದಲು ಸೀರೆ ಧರಿಸಿದ್ರೆ ಚೆನ್ನಾಗಿತ್ತು ಅಂತ ನೆಟ್ಟಿಗರು ಕಿಚಾಸಿದ್ದಾರೆ. ಹಾಗೆಯ ಕೆಲವು ನೆಟ್ಟಿಗರು ಶೂರ್ದೂಲ್ ಕಾರ್ಯವನ್ನು ಪ್ರಶಂಸಿದ್ದಾರೆ.