ಕೊರೊನ ಹೀಗೆ ಮುಂದುವರೆದರೆ ಸಚಿವ ಸುಧಾಕರ್ 3ನೇ ಶ್ರೀಮಂತ ಕೋಟ್ಯಾಧೀಶ್ವರರಾಗಲಿದ್ದಾರೆ

ರಾಜ್ಯದಲ್ಲಿ ಕೊರೊನ ಅಟ್ಟಹಾಸ ಮುಂದುವರೆದಿದೆ. ಮುಗ್ದ ಜನರ ಸಾವು ನೋವುಗಳು ಹೇಳತೀರದು. ಇದರ ಮದ್ಯ ರಾಜ್ಯ ಸರ್ಕಾರ ಕೋಟಿ ಕೋಟಿ ಹಣವನ್ನು ಜನರಿಗಾಗಿ ಅವರ ಬೆಡ್, ಚಿಕಿತ್ಸೆ ವೆಚ್ಚ, ಆಕ್ಸಿಜನ್  ವ್ಯವಸ್ಥೆಗಾಗಿ ತೆರಿಗೆ ಹಣವನ್ನು ಖರ್ಚು ಮಾಡುತ್ತಿರುವುದು ಎಲ್ಲರಿಗು ತಿಳಿದ ವಿಚಾರ.



ಅರೋಗ್ಯ ಸಚಿವರು ಹಣ ಮಾಡುವುದರಲ್ಲಿ ಹಿಂದೆ ಬಿದ್ದಿಲ್ಲ. ಕೊರೊನ ಸಚಿವರಿಗೆ ಚಿನ್ನದ ಮೊಟ್ಟೆ ಹಿಡುವ ಕೋಳಿಯಾಗಿದೆ ಎಂದರೆ ತಪ್ಪಲಾಗಲಾರದು. ಇದಕ್ಕೆ ಪುಷ್ಟಿ ಕೊಡುವ ವಿಷಯ ಇಲ್ಲಿವೆ.

ಬೆಂಗಳೂರುನ ಪೀಣ್ಯ ಮೂಲದ 09 ಆಕ್ಸಿಜನ್ ಉತ್ಪಾದಿಸುವ ಕಾರ್ಖಾನೆಗಳಿಗೆ ಬೀಗ ಜಡಿಸಿದ್ದಾರೆ.

ಆಕ್ಸಿಜನ್ ಗಗನದಲ್ಲಿ ಇದ್ದರು ಈ ರೀತಿಯ ದುರ್ಘಟನೆಗೆ ಮೂಲ ಕಾರಣ ಸಚಿವ ಸುಧಾಕರ್ ರವರ ಹಣದ ದುರಾಸೆ.

ಕಾರ್ಖಾನೆಗಳು ಪ್ರತಿ ಆಕ್ಸಿಜನ್ ಸಿಲಿಂಡರ್ ನ ಬೆಲೆಯನ್ನು 3-4 ಸಾವಿರಕ್ಕೆ ಮೂಲ ಬೆಲೆಯಲ್ಲಿ ಮಾರುತ್ತಿದ್ದರು ಆದರೆ ಸಚಿವ 24 ಕಾರ್ಖಾನೆಗಳಿಗೆ ಪ್ರತಿ ಸಿಲಿಂಡರ್ ವ್ಯವಹಾರದ ಮೇಲೆ ೬ ಸಾವಿರವನ್ನು ಫಂಡ್ ರೀತಿಯಲ್ಲಿ ಸಚಿವರಿಗೆ ನೀಡಬೇಕು ಎಂದು ಅಕ್ರಮಕ್ಕೆ ಕೈ ಹಾಕಿರುವದು ಬೆಳಕಿಗೆ ಬಂದಿದೆ. ಇದಲ್ಲದೆ ಇದರಿಂದ ಪ್ರತಿ ಆಕ್ಸಿಜನ್ ಬೆಲೆ ದ್ವಿಗುಣವಿಗಲಿದೆ ಎಂಬುದು ಕಾರ್ಖಾನೆ ಮಾಲೀಕರ ತಲೆನೋವಾಗಿದ್ದು ಸಚಿವರ ಹಣದ ಆಸೆಯ ಫಲ ಜನರ ಮೇಲೆ ಹೊರೆಯಾಗಿದ್ದು. ಇದೇರೀತಿ  ಬೆಡ್ ವ್ಯವಸ್ಥೆಯಲ್ಲೂ ಕಮಿಷನ್ ಪಡೆಯುತ್ತಿರುವ ಸಚಿವರ ಜೇಬಿಗೆ ಹಣದ ರಾಶಿಯೇ ಹರಿಯುತ್ತಿದೆ. 

ಜನರ ಸಾವಿನ ಮೇಲೆ ಹಣದ ಸಾಮ್ರಾಜ್ಯ ಕಟ್ಟುತ್ತಿರುವ ಸಚಿವ ಸುಧಾಕರ್ ವಿರುದ್ಧ ಸಂಪುಟದ ಸಚಿವರೇ ಬೇಸರ ಹೊರ ಹಾಕಿದ್ದಾರೆ .