ಲಡ್ಕಿ ಬ್ಯೂಟಿಫುಲ್ ❤️ : ಏನಿದು ಉಡುಪಿ ಯುವ ಕಾಂಗ್ರೆಸ್ ಅಧ್ಯಕ್ಷನ ಅವಾಂತರ : ಮುಜುಗರಕ್ಕೆ ಸಿಲುಕಿದ ಉಡುಪಿ ಕಾಂಗ್ರೆಸ್ ನಾಯಕರು

 ಯುವ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಫೇಸ್ಬುಕ್ ಅವಾಂತರ : ಮುಜುಗರಕ್ಕೆ ಸಿಲುಕಿದ ಉಡುಪಿ ಕಾಂಗ್ರೆಸ್


ಉಡುಪಿ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷೆಯ ಪ್ರೊಫೈಲ್ ಫೋಟೋಗೆ ಲಡ್ಕಿ ಬ್ಯೂಟಿಫುಲ್❤️ ಎಂದು ಅಸಭ್ಯವಾಗಿ ಅಪರಾತ್ರಿ ವೇಳೆಯಲ್ಲಿ ಕಾಮೆಂಟಿಸಿದ್ದು, ಅದರ ಸ್ಕ್ರೀನ್ ಶಾಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ತೀವ್ರ ಮುಜುಗರಕ್ಕೆ ಸಿಲುಕಿದ್ದಾರೆ.



ಬಿಜೆಪಿ ಕಾರ್ಯಕರ್ತರು ಇದನ್ನು ಅಸ್ತ್ರವನ್ನಾಗಿಸಿಕೊಂಡು, ನಿಮ್ಮ ರಾಜ್ಯ ನಾಯಕಿಗೆ ಇಂತಹ ಪರಿಸ್ಥಿತಿ ಆದರೆ ಸಾಮಾನ್ಯ ಮಹಿಳಾ ಕಾರ್ಯಕರ್ತರ ಪರಿಸ್ಥಿತಿ ಹೇಗೆ ಇರಬಹುದೆಂದು ಕಾಂಗ್ರೆಸ್ ಕಾರ್ಯಕರ್ತರ ಕಾಲೆಳೆಯುತ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ಮೌನಕ್ಕೆ ಶರಣಾಗಿದ್ದಾರೆ. ಪಕ್ಷದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರ ಈ ವರ್ತನೆಯ ವಿರುದ್ಧ ಸ್ವಪಕ್ಷೀಯರೇ ಕ್ರಮ ಕೈಗೊಳ್ಳಲು ಆಗ್ರಹಿಸುತ್ತಿದ್ದು , ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದ ನಾಯಕನ ವಿರುದ್ಧ ಕಾಂಗ್ರೆಸ್ ನಾಯಕರು ಯಾವ ರೀತಿಯ ಶಿಸ್ತು ಕ್ರಮ ಕೈಗೊಳ್ಳಲಿದ್ದಾರೆ ಎಂದು ಜನ ಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. 



ಸಾಮಾಜಿಕ ಜಾಲತಾಣದಲ್ಲಿ ಇದರ ಕುರಿತಾಗಿ ಪರ ಮತ್ತು ವಿರೋಧ ಚರ್ಚೆ ಜಾಸ್ತಿಯಾಗಿದ್ದು, ಒಂದು ರಾಷ್ಟ್ರೀಯ ಪಕ್ಷದ ಜಿಲ್ಲಾ ಅಧ್ಯಕ್ಷ ವಾರ್ಡ್ ಮಟ್ಟದ ನಾಯಕನಿಗಿಂತಲೂ ಅಪ್ರಬುದ್ಧವಾಗಿ ವರ್ತಿಸಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.