ಮೇ. 10 ರಿಂದ 24 ರ ತನಕ ಲಾಕ್ ಡೌನ್ - ಬುದ್ದಿ ಭ್ರಮಣೆ ಸರಕಾರ ಎಂದ ಜನ

 ಬೆಂಗಳೂರು- ಡೆಡ್ಲಿ ಕಿಲ್ಲರ್ ಕೊರೊನಾ ಕಟ್ಟಿ ಹಾಕಲು ರಾಜ್ಯ ಸರ್ಕಾರದ ಟೈಟ್ ಲಾಕ್ ಡೌನ್ ಜಾರಿಗೊಳಿಸಿದೆ. ಮೇ 10 ರಿಂದ ಈ ಲಾಕ್ ಡೌನ್ ಅನುಷ್ಠಾನಗೊಳಿಸಲಾಗುವುದು.



ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಇಂದು ಬೆಳಗ್ಗೆಯಿಂದ ‌ನಡೆದ ಹಿರಿಯ ಅಧಿಕಾರಿಗಳು ಮತ್ತು ಸಚಿವರ ಸಭೆಯ ನಂತರ ಈ ತೀರ್ಮಾನ ಕೈಗೊಳ್ಳಲಾಯಿತು.

ಪ್ರಸ್ತುತ ಈಗ ಜಾರಿ ಮಾಡಿರುವ ಲಾಕ್ ಡೌನ್ ನಲ್ಲಿ ಕೆಲವು ಪರಿಷ್ಕರಣೆ ಮಾಡಲಾಗಿದೆ. ಆದರೆ ಮೇ.10 ರಂದು ಜಾರಿ ಮಾಡುತ್ತಿರುವ ಲಾಕ್ ಡೌನ್ ನಲ್ಲಿ ಕೆಲವು ಗೊಂದಲ ಏರ್ಪಟ್ಟಿದೆ.

ಇದರಿಂದ ಈಗ ಜಾರಿ ಮಾಡಿರುವ ತಮಾಷೆ ಲಾಕ್ ಡೌನ್ ನಂತೆ ಮುಂದೆ ಜಾರಿಗೊಳಿಸುವ ಲಾಕ್ ಡೌನ್ ಕೂಡ ತಮಾಷೆ ಆಗಬಹುದೆ ಎಂಬ ಪ್ರಶ್ನೆ ಎದುರಾಗಿದೆ.

ಕಟ್ಟಡ ನಿರ್ಮಾಣ ಕಾಮಗಾರಿ ತಳ್ಳುವ ಗಾಡಿಯ ವ್ಯಾಪಾರ, ಹತ್ತಿರದಲ್ಲಿರುವ ಹೋಟೆಲ್ ಗೆ ಕಾಲ್ನಡಿಗೆಯಲ್ಲಿ ತೆರಳುವುದು ಸೇರಿದಂತೆ ಅಗತ್ಯ ವಸ್ತುಗಳ ಖರೀದಿ ಗೆ ಅವಕಾಶ ನೀಡಲಾಗಿದೆ. ಆದರೆ ಯಾರಿಗೂ ಪಾಸ್ ವಿತರಣೆ ಇಲ್ಲ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ತಿಳಿಸಿದ್ದಾರೆ.

ಮೇ 24 ಶಾಲಾ, ಕಾಲೇಜು ಬಂದ್ ಇರುತ್ತದೆ. ಮಾಂಸ ಮಾರಾಟ, ಮದುವೆಗೆ 50 ಜನರಿಗೆ ಸೀಮಿತ ಸೇರಿದಂತೆ ಹಲವು ಮಾರ್ಗ ಸೂಚಿ ಕಟ್ಟು ನಿಟ್ಟಾಗಿ ಇರುತ್ತದೆ ಎಂದು ರವಿಕುಮಾರ್ ತಿಳಿಸಿದರು.

 

ಬಾರ್ ಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ 10 ಗಂಟೆ ತನಕ ಪಾರ್ಸೆಲ್ ನೀಡಬಹುದು, ಯಾವುಧ ವಸ್ತುಗಳ ಖರೀದಿ ಇದ್ದರೂ ವಾಹನದಲ್ಲಿ ಹೋಗಬಹುದು.